ಬೆಂಗಳೂರು, ಏಪ್ರಿಲ್ 17 ( ಕರ್ನಾಟಕ ವಾರ್ತೆ ) : ರಾಜ್ಯದ ಭತ್ತಜದ ಕಣಜ ಎಂದೇ ಹೆಸರಾದ ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಇತ್ತೀಚೆಗೆ ಬಿದ್ದ ಆಲಿಕಲ್ಲು ಮಳೆಯಿಂದ ಪ್ರಾಥಮಿಕ ವರದಿಗಳ ಅಂದಾಜಿನಂತೆ 350 ಕೋಟಿ ರೂ ನಷ್ಟ ಉಂಟಾಗಿದೆ ಎಂದು ಪಶುಸಂಗೋಪನಾ ಮತ್ತು ಮುಜರಾಯಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಟಿ. ಬಿ. ಜಯಚಂದ್ರ ಅವರು ಇಲ್ಲಿ ಇಂದು ತಿಳಿಸಿದರು.
ಸಚಿವ ಸಂಪುಟ ಸಭೆಯ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು 55,406 ಹೆಕ್ಟೇರ್ ಪ್ರದೇಶದಲ್ಲಿನ ಭತ್ತ, ಮುಸುಕಿನ ಜೋಳ ಹಾಗೂ ಹತ್ತಿ ಬೆಳೆ ನಾಶವಾಗಿದೆ. ಅಲ್ಲದೆ, 1434 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕಾ ಬೆಳೆಗಳಿಗೂ ಹಾನಿಯಾಗಿದೆ. ಅಂತೆಯೇ, 14 ಜೀವ ಹಾನಿ ಸಂಭವಿಸಿದೆ. ಇದಲ್ಲದೆ, 90 ಜಾನುವಾರುಗಳು ಸಾವನ್ನಪ್ಪಿವೆ. ಜೊತೆಗೆ, 774 ಮನೆಗಳೂ ನಾಶವಾಗಿವೆ ಎಂದರು.
ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆಯ ಮಾರ್ಗಸೂಚಿಗಳಂತೆ ಪ್ರತಿ ಹೆಕ್ಟೇರ್‍ಗೆ 13,500 ರೂ ಬೆಳೆ ಹಾನಿ ಪರಿಹಾರ ಕೊಡಬೇಕಾಗುತ್ತದೆ. ಅದರಂತೆ ಸಂಭವಿಸಿರುವ ನಷ್ಟಕ್ಕೆ 83 ಕೋಟಿ ರೂ ಪರಿಹಾರ ನೀಡಬೇಕಾಗುತ್ತದೆ ಆದರೆ, ಈ ಮೊತ್ತ ಅತಿ ಕಡಿಮೆ ಎಂಬುದು ಸಂಪುಟದ ಅಭಿಪ್ರಾಯವಾಗಿದೆ.
ಈ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ರಾಜ್ಯ ಸರ್ಕಾರದಿಂದಲೂ ಹೆಚ್ಚುವರಿಯಾಗಿಸೂಕ್ತ ಪರಿಹಾರ ಘೋಷಿಸಬೇಕೆಂದು ಸಂಪುಟ ನಿರ್ಧರಿಸಿದೆ.
ಸಂಪುಟದ ಈ ನಿರ್ಣಯಕ್ಕೆ ಅನುಗುಣವಾಗಿ ಮುಖ್ಯಮಂತ್ರಿಗಳು ಶೀಘ್ರವೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವರು ವಿವರಿಸಿದರು
http://karnatakavarthe.org/en/rs-350-crore-loss-due-to-hailstorm-in-koppal-and-raichuru-district/
Bangalore, April 17 (ii) Bijapur and Raichur districts of the state known as the granary bhattajada recently estimated that preliminary reports from the rain and hail fell Rs 350 crore due to the loss of the animal and the endowment as well as legal and parliamentary affairs minister Mr T. B. Jayacandra he said here today.
Speaking to the media after a meeting of the Cabinet of 55.406 hectares of rice, corn and cotton crop has been destroyed. Also, the 1434 hectares of horticultural crops damaged. Likewise, 14 Life damage has occurred. In addition, 90 cattle killed. In addition, 774 houses were destroyed, he said.
The central government's new National Disaster Response Force margasucigalante Rs 13,500 per hectare should be compensation for crop damage. But as well as pay a compensation of Rs 83 crore loss has occurred, noting that this is the sum of the volume is very low.
The volume of distressed farmers of the State Government has decided to declare heccuvariyagisukta solution.
Will soon take a decision in accordance with the decision of the Cabinet Ministers, the Minister explained.