Informations should not just be for the geographically, financially otherwise fortunate — for it is the unfortunate who need it most.

August 12, 2015

98 taluks in 26 districts to be declareddrought-hit

As many as 98 taluks in 26 districts in the State will be declared drou-ght-hit following the failure of the southwest monsoon.
Briefing reporters on the Cabinet decision, Law and Parliamentary Affairs Minister T B Jayachandra said several parts of the State had witnessed a dry spell for more than one and a half months. Sixteen districts have received deficit rainfall and farmers have not been able to commence the kharif sowing operation in these places. Ten out of 16 affected districts are in North Karnataka. Yadgir, Gadag, Kalaburagi, Raichur and Vijayapura are the worst-affected districts. Water level in all the 13 important reservoirs, including Krishnarajasagar and Almatti, is low. The government will soon approach the Centre for financial assistance, the minister said.
The Cabinet sub-committee on drought has been directed to assess the situation and submit a detailed report on the effects of drought. Chief secretary Kaushik Mukherjee has been directed to monitor the situation and issue appropriate directions to the deputy commissioners of all the districts on mitigating people's problems in the affected places.
The government has already released Rs 200 crore for taking up relief measures. About Rs 75 crore will be spent on supply drinking water through tankers and Rs 75 crore will be spent on energising the drinking water borewells, he said.
Maritime Board Bill
Jayachandra said the Cabinet had decided to take back the Karnataka Maritime Board Bill 2011, currently pending before the President, and introduce a new piece of legislation. The bill envisages development of ports under public-private partnership by setting up a maritime board.
The plan was to entrust the responsibility of finding ways and means to undertake various developmental projects and maintenance activities of ports, harbours, inland waterways and development of coastal region to the board. It also had a provision for the development and maintenance of fishing harbours.
The Cabinet approved a proposal to convert a stretch of road between Gun House in Mysuru city and Nanjangud road junction of NH-212 into a four-lane route. Rs 17.20 crore will be spent for the purpose. The Cabinet also gave its administrative approval to the rules framed for enforcing the Karnataka Compulsory Service Training by Candidates Completed Medical Courses Act, 2012.
Reservoir levels
Name of Gross storage Present storage
the reservoir capacity (TMC) as on Aug 11 (TMC)
Linganamakki 151.75 66.05
Supa 145.33 64.78
Varahi 31.13 17.67
Harangi 8.50 8.31
Hemavathi 37.10 28.62
KRS 49.45 28.64
Kabini 19.52 17.60
Bhadra 71.53 50.01
Tungabhadra 100.86 69.57
Ghataprabha 51.00 19.52
Malaprabha 37.73 12.43
Almatti 123.08 72.45
Narayanapura 33.31 26.47
Rainfall pattern as on August 11
Percentage
District departure of rainfall
1. Vijayapura -63
2. Raichur -61
3. Yadgir -55
4. Bagalkot -52
5. Kalaburagi -51
6. Bidar -50
7. Gadag -44
8. Koppal -41
9. Belagavi -41
10. Dharwad -39
11. Haveri -29
12. Ballari -27
13. Chikkaballapur -24
14. Chamarajanagar -23
15. Ramanagara -22
16. Kolar -22



98 Taluks in 26 Districts in State declared as drought-hit

Date : Tuesday, August 11th, 2015

ಬೆಂಗಳೂರು, ಆಗಸ್ಟ್ 11 ( ಕರ್ನಾಟಕ ವಾರ್ತೆ ):
ರಾಜ್ಯದ 26 ಜಿಲ್ಲೆಗಳ 98 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ಪ್ರಾಥಮಿಕ ಹಂತದಲ್ಲಿ ಈ ಎಲ್ಲಾ ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ರಾಜ್ಯ ಸಚಿವ ಸಂಪುಟ ಘೋಷಿಸಿದೆ.
ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಪಶುಸಂಗೋಪನಾ ಮತ್ತು ಮುಜರಾಯಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಟಿ. ಬಿ. ಜಯಚಂದ್ರ ಅವರು ಸುದ್ದಿ ಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ಟ್ಯಾಂಕರ್ ಮೂಲಕ ತುರ್ತು ಕುಡಿಯುವ ನೀರು ಸರಬರಾಜು ಮಾಡಲು 25 ಕೋಟಿ ರೂ., ಕೊಳವೆ ಬಾವಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು 50 ಕೋಟಿ ರೂ. ಸೇರಿದಂತೆ 200 ಕೋಟಿ ರೂ. ಗಳನ್ನು ರಾಜ್ಯ ಹಣಕಾಸು ಇಲಾಖೆ ಈಗಾಗಲೇ ಬಿಡುಗಡೆ ಮಾಡಿದೆ.  
ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಬರ ನಿರ್ವಹಣೆ ಸಮಿತಿ ಮೇಲ್ವಿಚಾರಣೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಿದೆ.  ಕುಡಿಯುವ ನೀರಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದು ಸಚಿವರು ಸ್ವಷ್ಟಪಡಿಸಿದರು. ಅಲ್ಲದೆ, ಆಗಸ್ಟ್ 16 ರಂದು ಎಲ್ಲಾ ಜಿಲ್ಲಾಡಳಿತದಿಂದ ವರದಿ ತರಿಸಿಕೊಂಡು ಸಚಿವ ಸಂಪುಟ ಉಪ ಸಮಿತಿ ಸಮಾಲೋಚನೆ ನಡೆಸಿ ಹೆಚ್ಚಿನ ಪರಿಹಾರಕ್ಕಾಗಿ  ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಬಗ್ಗೆಯೂ ತೀರ್ಮಾನ ಕೈಗೊಳ್ಳಲಿದೆ ಎಂದರು.
ರಾಜ್ಯದ 13 ಪ್ರಮುಖ ಜಲಾಶಯಗಳಲ್ಲಿ ಕಳೆದ ಬಾರಿಗಿಂತ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಾಗಿದೆ. ಜೊತೆಗೆ, 16 ಜಿಲ್ಲೆಗಳಲ್ಲಿ ಸರಾಸರಿ ಶೇಕಡಾ 22 ರಷ್ಟು ಮಳೆ ಕಡಿಮೆ ಆಗಿದೆ.
ವಿಜಯಪುರ ಜಿಲ್ಲೆಯಲ್ಲಿ ಶೇಕಡಾ 63, ರಾಯಚೂರು ಜಿಲ್ಲೆಯಲ್ಲಿ ಶೇಕಡಾ 61, ಯಾದಗಿರಿ ಜಿಲ್ಲೆಯಲ್ಲಿ ಶೇಕಡಾ 55, ಬಾಗಲಕೋಟೆ ಜಿಲ್ಲೆಯಲ್ಲಿ ಶೇಕಡಾ 52, ಕಲಬುರಗಿ ಜಿಲ್ಲೆಯಲ್ಲಿ ಶೇಕಡಾ 51, ಬೀದರ್ ಜಿಲ್ಲೆಯಲ್ಲಿ ಶೇಕಡಾ 50, ಗದಗ ಜಿಲ್ಲೆಯಲ್ಲಿ ಶೇಕಡಾ 44, ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 41, ಬೆಳಗಾವಿ ಜಿಲ್ಲೆಯಲ್ಲಿ ಶೇಕಡಾ 41, ಧಾರವಾಡ ಜಿಲ್ಲೆಯಲ್ಲಿ ಶೇಕಡಾ 39, ಹಾವೇರಿ ಜಿಲ್ಲೆಯಲ್ಲಿ ಶೇಕಡಾ 29, ಬಳ್ಳಾರಿ ಜಿಲ್ಲೆಯಲ್ಲಿ ಶೇಕಡಾ 27, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇಕಡಾ 24, ಚಾಮರಾಜನಗರ ಜಿಲ್ಲೆಯಲ್ಲಿ ಶೇಕಡಾ 23, ರಾಮನಗರ ಜಿಲ್ಲೆಯಲ್ಲಿ ಶೇಕಡಾ 22 ಹಾಗೂ ಕೋಲಾರ ಜಿಲ್ಲೆಯಲ್ಲಿ ಶೇಕಡಾ 22 ರಷ್ಟು ಮಳೆ ಕಡಿಮೆ ಆಗಿರುವುದರಿಂದ ಈ ಜಿಲ್ಲೆಗಳಲ್ಲಿ ಸಮರೋಪಾದಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಂಬಂಧಿತ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
2015-16 ನೇ ಸಾಲಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ಸಂಸ್ಥೆ ಸಹ ಭಾಗಿತ್ವದಲ್ಲಿ ಮುಂದುವರೆಸಲು ಸಂಪುಟ ಅನುಮೋದನೆ ನೀಡಿದೆ.
ರಾಜ್ಯ ಸಹಕಾರಿ ಬ್ಯಾಂಕ್ಗಳಿಗೆ ನಬಾರ್ಡ್ನಿಂದ 1550 ಕೋಟಿ ರೂ. ಸಾಲ ಪಡೆಯಲು ರಾಜ್ಯ ಸರ್ಕಾರ ಖಾತ್ರಿ ನೀಡಲು ಒಪ್ಪಿಗೆ ನೀಡಿತು ಎಂದು ಕಾನೂನು ಸಚಿವರು ಹೇಳಿದರು.
ರಾಜ್ಯದಲ್ಲಿ ಎಂ. ಸ್ಯಾಂಡ್ ತಯಾರಿಕೆಯಲ್ಲಿ ಪ್ರೋತ್ಸಾಹಿಸಲು ನೈಸರ್ಗಿಕ ಮರಳು ಲಭ್ಯತೆ ಇಲ್ಲದೇ ಇರುವ ಜಿಲ್ಲೆಗಳಲ್ಲಿ ಎಂ. ಸ್ಯಾಂಡ್ನ ಹೊಸ ಘಟಕಗಳಿಗ ಹಾಗೂ ಪ್ರಸ್ತುತ ಕ್ರಷರ್ ಘಟಕಗಳನ್ನು ಎಂ. ಸ್ಯಾಂಡ್ ಘಟಕಗಳನ್ನಾಗಿ ಪರಿವರ್ತಿಸುವವರಿಗೆ ಶೇಕಡಾ 5 ರಷ್ಟು ಸಾಲದ ಮೇಲಿನ ಬಡ್ಡಿ ಹಣವನ್ನು ಪ್ರೋತ್ಸಾಹ ಧನವನ್ನಾಗಿ ನೀಡಲು ಸಂಪುಟ ಒಪ್ಪಿಗೆ ನೀಡಿದ್ದು, ಇದಕ್ಕಾಗಿ 5 ಕೋಟಿ ರೂ ಹಣವನ್ನು ಮೀಸಲಿಡಲಾಗಿದೆ.
ರಾಜ್ಯ ಸರ್ಕಾರಿ ವಿಮಾ ಇಲಾಖೆಯಲ್ಲಿ ಕಡ್ಡಾಯ ಜೀವಾ ವಿಮಾ ಶಾಖೆ ವಿಮಾದಾರರಿಗೆ 2010-12 ಹಾಗೂ 2012-14 ರವರೆಗೆ ಪ್ರತಿ ಸಾವಿರಕ್ಕೆ 90 ರೂ ಬೋನಸ್ ನೀಡಲು ಸಂಪುಟ ಅನುಮೋದನೆ ನೀಡಿದೆ.
ರಾಜ್ಯ ವೈದಕೀಯ ಕೋರ್ಸ್ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಗ್ರಾಮೀಣ ಸೇವೆ ಸಲ್ಲಿಸುವ ನಿಯಾಮವಳಿಗೆ ಸಂಪುಟ ಅನುಮೋದನೆ ನೀಡಿದೆ ಎಂದು ಶ್ರೀ ಜಯಚಂದ್ರ ತಿಳಿಸಿದರು.
ಗಣರಾಜ್ಯೋತ್ಸವದ ಮುನ್ನಾ ದಿನದಂದು ಪ್ರಕಟಿಸುವ ಪದ್ಮ ಶ್ರೇಣಿ ಪ್ರಶಸ್ತಿ ಶಿಫಾರಸ್ಸು ಮಾಡಲು ಮುಖ್ಯಮಂತ್ರಿಯವರಿಗೆ ಸಂಪುಟ ಪರಮಾಧಿಕಾರ ನೀಡಿದೆ ಎಂದರು.
ಕಳಸಾ-ಬಂಡೂರಿ
ಕಳಸಾ-ಬಂಡೂರಿ ನಾಲಾ ಕುಡಿಯುವ ನೀರಿನ ಯೋಜನೆ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಮನವರಿಕೆ ಮಾಡಿ ಕೊಡಲು ಮುಖ್ಯಮಂತ್ರಿ ಅವರ ಪತ್ರದೊಂದಿಗೆ ತಾವು ನಾಳೆ ದೆಹಲಿಗೆ ತೆರಳುತ್ತಿರುವುದಾಗಿ ಜಲ ಸಂಪನ್ಮೂಲ ಸಚಿವ ಶ್ರೀ ಎಂ. ಬಿ. ಪಾಟೀಲ್ ಅವರು ಪ್ರಕಟಿಸಿದ್ದಾರೆ.
ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಾದಾಯಿ ವಿಷಯ ನ್ಯಾಯಾಧೀಕರಣದ ಮುಂದಿದೆ.  ನ್ಯಾಯಾಧೀಕರಣ 22 ಸಭೆಗಳನ್ನು ಮಾಡಿ ವಿವರಗಳನ್ನು ಆಲಿಸಿದೆ.  ಆದರೆ ನರಗುಂದ, ನವಲಗುಂದ ಸೇರಿದಂತೆ ಆ ಭಾಗದ ಜನರು ಉಗ್ರ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನೀಡುವ ಸೂಚನೆಯ ಮೇರೆಗೆ ಪ್ರಧಾನಮಂತ್ರಿಯವರಿಗೆ ತುರ್ತಿನ ಮನವರಿಕೆ ಮಾಡಲು ತಾವು ದೆಹಲಿಗೆ ಹೋಗಿ ಕೇಂದ್ರದಲ್ಲಿರುವ ರಾಜ್ಯ ಸಚಿವರನ್ನು ಭೇಟಿ ಮಾಡಿ ಪ್ರಧಾನಮಂತ್ರಿಯವರ ಕಾಲಾವಕಾಶ ಕೋರುವುದಾಗಿ ಹೇಳಿದರು.
ಮೂರೂ ರಾಜ್ಯಗಳ ವ್ಯಾಪ್ತಿಯಲ್ಲಿ ಈ ವಿಷಯವಿರುವುದರಿಂದ ಆ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಪರಿಹಾರ ಕಂಡು ಹಿಡಿಯುವ ಬಗ್ಗೆ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಈಗಾಗಲೇ ಮುಖ್ಯಮಂತ್ರಿಯವರು ಕಳೆದ ಒಂದು ವಾರದ ಹಿಂದೆ ಪ್ರಧಾನಿಯವರಿಗೆ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿ ಪತ್ರ ಬರೆದಿದ್ದರು.  ಈ ವಿಷಯ ಕುರಿತಂತೆ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಶ್ರೀ ಪ್ರಲ್ಹಾದ್ ಜೋಷಿ ಅವರೊಂದಿಗೆ ಮಾತನಾಡಿದ್ದೇನೆ.  ಪ್ರತಿಪಕ್ಷದ ನಾಯಕರಾದ ಶ್ರೀ ಜಗದೀಶ್ ಶೆಟ್ಟರ್ ಹಾಗೂ ರಾಜ್ಯದ ಸಂಸದರಿಗೂ ಮನವಿ ಮಾಡಿರುವುದಾಗಿ ಹೇಳಿದರು.  ಕುಡಿಯುವ ನೀರಿನ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಸಚಿವರು ಮನವಿ ಮಾಡಿದರು.
ಈ ವರ್ಷ ಸಾಂಪ್ರದಾಯಿಕ ದಸರಾ
ರಾಜ್ಯದಲ್ಲಿ ಬರ ಇರುವ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವನ್ನು ಸಾಂಪ್ರದಾಯಕ ಹಾಗೂ ಕಡಿಮೆ ವೆಚ್ಚದಲ್ಲಿ ಆಚರಿಸಲು ಸಚಿವ ಸಂಪುಟ ತೀರ್ಮಾನಿಸಿದೆ.
ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ಈ ತೀರ್ಮಾನಕ್ಕೆ ಬರಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಟಿ. ಬಿ. ಜಯಚಂದ್ರ ಅವರು ತಿಳಿಸಿದರು.